Thursday, 10 September 2015

ಅಮ್ಮಾ ನಿನ್ನ ಎದೆಯಾಳದಲ್ಲಿ

ಅಮ್ಮಾ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು
ಮಿಡುಕಾಡುತಿರುವೆ ನಾನು
ಕಡಿಯೋಲ್ಲೆಲ್ಲೇ ನೀ ಕರುಳಬಳ್ಳಿ, ಒಲವುಡುತಿರುವ ತಾಯೇ,
ಬಿಡದ ಭುವಿಯ ಮಾಯೆ

ನಿನ್ನ ರಕ್ಷೆ ಗೂಡಲ್ಲಿ ಬೆಚ್ಚಗೆ ಅಡಗಲಿ ಎಷ್ಟು ದಿನ?
ಧೂಡು ಹೊರಗೆ ನನ್ನ
ಓಟ ಕಲಿವೆ.. ಒಳನೋಟ ಕಲಿವೆ..
ನಾ ಕಲಿವೆ ಊರ್ಧ್ವ ಗಮನ..
ಓ ಅಗಾಧ ಗಗನ 

ಮೇಲೆ ಹಾರಿ.. ನಿನ್ನ ಸೆಳೆತ ಮೀರಿ
ನಿರ್ಭಾರ ಸ್ಥಿತಿಗೆ ತಲುಪಿ.. 
ಬ್ರಹ್ಮಾಂಡವನ್ನೇ ಬೆದಕಿ

ಇದನ್ನ ತೀರಲು ಬಂದೇ  ಬರುವೆನು
ಮತ್ತೆ ನಿನ್ನ ತೊಡೆಗೆ ಮೂರ್ತ ಪ್ರೇಮದೇಡೆಗೆ 

-ಬಿ ಆರ್ ಲಕ್ಷ್ಮಣ್ ರಾವ್ 

Monday, 31 August 2015

ಯಾವ ಮೋಹನ ಮುರಳಿ ಕರೆಯಿತು

"ಯಾವ ಮೋಹನ ಮುರಳಿ ಕರೆಯಿತು" ನನಗೆ ತುಂಬಾ ಇಷ್ಟವಾದ ಪದ್ಯ ಮತ್ತು ಹಾಡು. ಸಾಹಿತ್ಯವನ್ನು ಪೋಸ್ಟ್ ಮಾಡಿದ್ದೇನೆ. ನಿಮಗೂ ಇಷ್ಟವಾಗಿದ್ದರೆ ಕಾಮೆಂಟ್ ಮಾಡಿ :)

ಯಾವ ಮೋಹನ ಮುರಳಿ ಕರೆಯಿತು
ದೂರ ತೀರಕೆ ನಿನ್ನನು
ಯಾವ ಬೃಂದಾವನವು ಸೆಳೆಯಿತೋ
ನಿನ್ನ ಮಣ್ಣಿನ ಕಣ್ಣನು

ಹೂವು ಹಾಸಿಗೆ ಚಂದ್ರ ಚಂದನ
ಬಾಹು ಬಂಧನ ಚುಂಬನ
ಬಯಕೆ ತೋಟದ ಬೇಲಿಯೊಳಗೆ
ಕರಣಗಳದೀ ರಿಂಗಣ

ಸಪ್ತ ಸಾಗರದಾಚೆ ಎಲ್ಲೋ
ಸುಪ್ತ ಸಾಗರ ಕಾದಿದೆ
ಮೊಳೆಯದಲೆಗಳ ಮೂಕ ಮರ್ಮರ
ಇಂದು ಇಲ್ಲಿಗು ಹಾಯಿತೇ

ವಿವಶವಾಯಿತು ಪ್ರಾಣ ಹಾ!
ಪರವಶವು ನಿನ್ನೀ ಚೇತನ
ಇರುವುದೆಲ್ಲವ ಬಿಟ್ಟು
ಇರದುದರೆಡೆಗೆ ತುಡಿವುದೆ ಜೇವನ

ಯಾವ ಮೋಹನ ಮುರಳಿ ಕರೆಯಿತೋ
ಇದ್ದಕಿದ್ದಲೆ ನಿನ್ನನು
ಯಾವ ಬೃಂದಾವನವು ಚಾಚಿತೋ
ತನ್ನ ಮಿಂಚಿನ ಕೈಯನು

- ಗೋಪಾಲ ಕೃಷ್ಣ ಅಡಿಗ